Friday, June 3, 2011

ಜೋಗಯ್ಯ : ಹೆತ್ತವಳಲ್ಲ ಅವಳು Jogayya: Hettavalalla Avalu


ಹಾಡು: ಹೆತ್ತವಳಲ್ಲ ಅವಳು 
ಚಿತ್ರ: ಜೋಗಯ್ಯ 
ಸಾಹಿತ್ಯ: ಪ್ರೇಮ್















ಜೋಗಯ್ಯ
ಹೆತ್ತವಳಲ್ಲ ಅವಳು
ಹೊತ್ತವಳಲ್ಲ ಅವಳು
ಯಾರೋ ಅವಳು ನಿನಗೆ ಜೋಗಿ
ಜೋಗಯ್ಯ
ಬಂಧು ಆಲ್ಲ ಅವಳು
ಬಳಗ ಅಲ್ಲ ಅವಳು
ಯಾರೋ ಅವಳು ನಿನಗೆ ಜೋಗಿ
ಹೆಜ್ಜೆ ಹೆಜ್ಜೆ ಕಾದೋಳು
ನೆರಳಿನಂಗೆ ನಿಂತೋಳು
ಕಣ್ಣ ಮುಂದೆ ಇದ್ದರೂನು ಕಾಣಲಿಲ್ಲ ಯಾಕೋ
ಜೀವ ಧಾನ ಮಾಡೆ ಹೋದ್ಲಯ್ಯ
ಜೋಗಯ್ಯ

ಯಾರು ತಿಳಿಯರು ನಿನ್ನ Yaaru thiliyaru Ninna


ಹಾಡು: ಯಾರು ತಿಳಿಯರು ನಿನ್ನ  
ಚಿತ್ರ: ಬಭ್ರುವಾಹನ 
ಸಾಹಿತ್ಯ: ಹುಣಸೂರು ಕೃಷ್ಣಮುರ್ತಿ


ಯಾರು ತಿಳಿಯರು ನಿನ್ನ ಭುಜಬಲದ ಪರಾಕ್ರಮ
ಸಮರದೋಳ್ ಆರ್ಜಿಸಿದ ಆ ನಿನ್ನ ವಿಜಯಗಳ ಮರ್ಮ
ಎಲ್ಲದಕು ಕಾರಣನು ಶ್ರೀಕೃಷ್ಣ ಪರಮಾತ್ಮ
ಹಗಲಿರುಳು ನೆರಳಂತೆ ತಲೆ ಕಾಯ್ದು ಕಾಪಾಡಿ
ಜಯವ ತಂದಿತ್ತ ಆ ಯದುನಂದನ
ಅವನಿಲ್ಲದೆ ಬಂದ ನೀನು ತೄಣಕ್ಕೆ ಸಮಾನ
ಅಸಾಹಾಯ ಶೂರ ನಾ ಅಕ್ಷೀಣ ಬಲನೋ
ಹರನೊಡನೆ ಹೋರಾಡಿ ಪಾಶುಪತವಂ ಪಡೆದವನೋ
ಆಗ್ರಹದೊಳೆದುರಾಗೊ ಅರಿಗಳಂ ನಿಗ್ರಹಿಸೋ ವ್ಯಾಘ್ರನಿವನೋ
ಉಗ್ರಪ್ರತಾಪೀ
ಓ ಹೊ ಒ ಹೋ ಉಗ್ರಪ್ರತಾಪಿ ಆ!
ಸಭೆಯೊಳಗೆ ದ್ರೌಪತಿಯ ಸೀರೆಯನು ಸೆಳೆವಾಗ ಎಲ್ಲಿ ಅಡಗಿತ್ತೋ ಈ ನಿನ್ನ ಶೌರ್ಯ
ನೂಪುರಂಗಳ ಕಟ್ಟಿ ನಟಿಸಿ ತಕಥೈಯಂದು ನಾಟ್ಯ ಕಲಿಸಿದ ನಪುಂಸಕ ನೀನು
ಚಕ್ರವ್ಯೂಹದೆ ನುಗ್ಗಿ ಛಲದಿಂದ ಛೇದಿಸದೆ ಮಗನನ್ನು ಬಲಿ ಕೊಟ್ಟ ಭ್ರಷ್ಟಾ ನೀನು
ಗಂಡುಗಲಿಗಳ ಗೆಲ್ಲೊ ಗುಂಡಿಗೆಯು ನಿನಗೆಲ್ಲೋ
ಖಂಡಿಸಿದೇ ಉಳಿಸುವೆ
ಹೋಗೊ ಹೋಗೆಲೋ ಶಿಖಂಡಿ
ಫಡ ಫಡ ಶಿಖಂಡಿಯಂದಡಿಗಡಿಗೆ ನುಡಿಯ ಬೇಡೆಲೋ ಮೂಢ
ಭಂಡರೆದೆ ಗುಂಡಿಗೆಯ ಖಂಡಿಸುತಾ ರಣಚಂಡಿಗೌತಣವೀವ ಈ ಗಾಂಡೀವಿ
ಗಂಡುಗಲಿಗಳ ಗಂಡ ಉದ್ಧಂಡ ಭೂಮಂಡಲದೊಳಖಂಡ ಕೀರ್ತಿ ಪ್ರಚಂಡ
ಚಂಡನೋ ಪ್ರಚಂಡನೋ ಪುಂಡನೋ ನಿರ್ಧರಿಸುವುದು ರಣರಂಗ
ಊಡು ಬಾಣಗಳ ಮಾಡುವೆ ಮಾನಭಂಗ
ಕದನದೋಳ್ ಕಲಿಪಾರ್ಥನಂ ಕೆಣಕಿ ಉಳಿದವರಿಲ್ಲ
ಅಬ್ಬರಿಸಿ ಭೊಬ್ಭಿರಿದರಿಲ್ಲಾರಿಗೂ ಭಯವಿಲ್ಲ
ಆರ್ಭಟಿಸಿ ಬರುತಿದೆ ನೋಡು ಅಂತಕನ ಆಹ್ವಾನ
ಅಂತಕನಿಗೆ ಅಂತಕನು ಈ ಬಭ್ರುವಾಹನ