Monday, July 18, 2011

ಓಡೋ ಓಡೋ ಓಡೋ .... Odo Odo Odale...


ಹಾಡು: ಓಡೋ ಓಡೋ ಓಡೋ .... 
ಚಿತ್ರ: ಜೋಗಯ್ಯ 
ಸಾಹಿತ್ಯ: ಪ್ರೇಮ್
  
ಓಡೋ ಓಡೋ  ಓಡೋ ....
ಓಡೋ  ಓಡಲೇ.... ಲಾಂಗು  ಗಿಂಗು  ಹಿಡಿಯಂಗಿಲ್ಲ
ಜೋಗಿ  ಬಂದ ಏ... ನಿಲ್ಲಂಗಿಲ್ಲ ಓಡಲೇ  ಓಡಲೇ 
 
ಭೂಮಿ  ತುಂಬ  ಮೋಸದ  ಜನರು 
ಬೇಡ  ಬಾರಯ್ಯ  ಯಾರು  ಇವರು 
ಬಾರೋ  ಜೋಗಿಯಾಗಿ  ಓಡಲೇ  ಓಡಲೇ  
 
ಜೌರ   ಬಂದು  ನಮ್  ಏರಿಯದೊಳಗೆ ಎಂಟ್ರಿ  ಆಗವ್ನೋ
ಊರು  ಕೇರಿ  ನಂದೇ  ಅಂತ  ಆರ್ಡರ್  ಮಾದವ್ನೋ...  ಓಡಲೇ  ಓಡಲೇ 
ಏರಿಯ  ಮಧ್ಯ  ಚೈರ್  ಹಾಕೊಂಡು  ಒಬ್ನೇ  ಕುಂತವ್ನೋ
ಅವನ್  ನೋಡಿದವರೆಲ್ಲ  ಎದ್ಧು  ಬಿದ್ಧು  ಚಿಲ್ಲ  ಪಿಲ್ಲಿನೋ  ಓಡಲೇ  ಓಡಲೇ  
 
ಓ ... ಕೋಟೆ  ಕಟ್ಟಾಳಿದ  ರಾಜರೆಲ್ಲ 
ಮಣ್ಣು  ಮಣ್ಣಾಗಿ  ಹೋದರೆಲ್ಲ 
ಬಾರೋ  ತ್ಯಾಗಿಯಾಗಿ  ಓಡಲೇ  ಓಡಲೇ  
 
ಹೆಂಡ  ವೊದ್ಕಂಡ್  ಮಲ್ಗಂಗಿಲ್ಲ  ಕನ್ಸಲ್  ಬರ್ತಾನೋ 
ಅ  ಹೆಂಡ್ರು  ಅಂತ  ಮುತ್ತಕ್  ಹೋದ್ರೆ  ಅಲ್ಲೇ  ಇರ್ತಾನೋ  ಓಡಲೇ  ಓಡಲೇ 
ಸುದುಗಾದಲ್ಲಿ  ಹಳ್ಳ  ತೊದ್ಕೊಂಡ್  ಟೈಟಾಗ್ ಕುಂತವ್ನೋ
ಎಷ್ಟೇ  ದೇವುರ್ಗೆ  ಹರಕೆ  ಹೊತ್ತರು  ಮಿಸ್ಸೆ  ಇಲ್ಲಾನೋ  ಓಡಲೇ  ಓಡಲೇ  
 
ಓ ... ಊರೇ  ಎದುರಾಗಿ  ಬರಲಿ  ನಿನಗೆ 
ನನ್ನ  ಪ್ರಾಣನೆ  ಕೊಡುವೆ  ಕೊನೆಗೆ 
ಬಾರೋ  ಯೋಗಿಯಾಗಿ  ಓಡಲೇ  ಓಡಲೇ  
 
ಲಾಂಗು  ಗಿಂಗು  ಹಿಡಿಯಂಗಿಲ್ಲ
ಜೋಗಿ  ಬಂದ  ಏ ... ನಿಲ್ಲಂಗಿಲ್ಲ  ಓಡಲೇ  ಓಡಲೇ ...

Friday, June 3, 2011

ಜೋಗಯ್ಯ : ಹೆತ್ತವಳಲ್ಲ ಅವಳು Jogayya: Hettavalalla Avalu


ಹಾಡು: ಹೆತ್ತವಳಲ್ಲ ಅವಳು 
ಚಿತ್ರ: ಜೋಗಯ್ಯ 
ಸಾಹಿತ್ಯ: ಪ್ರೇಮ್















ಜೋಗಯ್ಯ
ಹೆತ್ತವಳಲ್ಲ ಅವಳು
ಹೊತ್ತವಳಲ್ಲ ಅವಳು
ಯಾರೋ ಅವಳು ನಿನಗೆ ಜೋಗಿ
ಜೋಗಯ್ಯ
ಬಂಧು ಆಲ್ಲ ಅವಳು
ಬಳಗ ಅಲ್ಲ ಅವಳು
ಯಾರೋ ಅವಳು ನಿನಗೆ ಜೋಗಿ
ಹೆಜ್ಜೆ ಹೆಜ್ಜೆ ಕಾದೋಳು
ನೆರಳಿನಂಗೆ ನಿಂತೋಳು
ಕಣ್ಣ ಮುಂದೆ ಇದ್ದರೂನು ಕಾಣಲಿಲ್ಲ ಯಾಕೋ
ಜೀವ ಧಾನ ಮಾಡೆ ಹೋದ್ಲಯ್ಯ
ಜೋಗಯ್ಯ

ಯಾರು ತಿಳಿಯರು ನಿನ್ನ Yaaru thiliyaru Ninna


ಹಾಡು: ಯಾರು ತಿಳಿಯರು ನಿನ್ನ  
ಚಿತ್ರ: ಬಭ್ರುವಾಹನ 
ಸಾಹಿತ್ಯ: ಹುಣಸೂರು ಕೃಷ್ಣಮುರ್ತಿ


ಯಾರು ತಿಳಿಯರು ನಿನ್ನ ಭುಜಬಲದ ಪರಾಕ್ರಮ
ಸಮರದೋಳ್ ಆರ್ಜಿಸಿದ ಆ ನಿನ್ನ ವಿಜಯಗಳ ಮರ್ಮ
ಎಲ್ಲದಕು ಕಾರಣನು ಶ್ರೀಕೃಷ್ಣ ಪರಮಾತ್ಮ
ಹಗಲಿರುಳು ನೆರಳಂತೆ ತಲೆ ಕಾಯ್ದು ಕಾಪಾಡಿ
ಜಯವ ತಂದಿತ್ತ ಆ ಯದುನಂದನ
ಅವನಿಲ್ಲದೆ ಬಂದ ನೀನು ತೄಣಕ್ಕೆ ಸಮಾನ
ಅಸಾಹಾಯ ಶೂರ ನಾ ಅಕ್ಷೀಣ ಬಲನೋ
ಹರನೊಡನೆ ಹೋರಾಡಿ ಪಾಶುಪತವಂ ಪಡೆದವನೋ
ಆಗ್ರಹದೊಳೆದುರಾಗೊ ಅರಿಗಳಂ ನಿಗ್ರಹಿಸೋ ವ್ಯಾಘ್ರನಿವನೋ
ಉಗ್ರಪ್ರತಾಪೀ
ಓ ಹೊ ಒ ಹೋ ಉಗ್ರಪ್ರತಾಪಿ ಆ!
ಸಭೆಯೊಳಗೆ ದ್ರೌಪತಿಯ ಸೀರೆಯನು ಸೆಳೆವಾಗ ಎಲ್ಲಿ ಅಡಗಿತ್ತೋ ಈ ನಿನ್ನ ಶೌರ್ಯ
ನೂಪುರಂಗಳ ಕಟ್ಟಿ ನಟಿಸಿ ತಕಥೈಯಂದು ನಾಟ್ಯ ಕಲಿಸಿದ ನಪುಂಸಕ ನೀನು
ಚಕ್ರವ್ಯೂಹದೆ ನುಗ್ಗಿ ಛಲದಿಂದ ಛೇದಿಸದೆ ಮಗನನ್ನು ಬಲಿ ಕೊಟ್ಟ ಭ್ರಷ್ಟಾ ನೀನು
ಗಂಡುಗಲಿಗಳ ಗೆಲ್ಲೊ ಗುಂಡಿಗೆಯು ನಿನಗೆಲ್ಲೋ
ಖಂಡಿಸಿದೇ ಉಳಿಸುವೆ
ಹೋಗೊ ಹೋಗೆಲೋ ಶಿಖಂಡಿ
ಫಡ ಫಡ ಶಿಖಂಡಿಯಂದಡಿಗಡಿಗೆ ನುಡಿಯ ಬೇಡೆಲೋ ಮೂಢ
ಭಂಡರೆದೆ ಗುಂಡಿಗೆಯ ಖಂಡಿಸುತಾ ರಣಚಂಡಿಗೌತಣವೀವ ಈ ಗಾಂಡೀವಿ
ಗಂಡುಗಲಿಗಳ ಗಂಡ ಉದ್ಧಂಡ ಭೂಮಂಡಲದೊಳಖಂಡ ಕೀರ್ತಿ ಪ್ರಚಂಡ
ಚಂಡನೋ ಪ್ರಚಂಡನೋ ಪುಂಡನೋ ನಿರ್ಧರಿಸುವುದು ರಣರಂಗ
ಊಡು ಬಾಣಗಳ ಮಾಡುವೆ ಮಾನಭಂಗ
ಕದನದೋಳ್ ಕಲಿಪಾರ್ಥನಂ ಕೆಣಕಿ ಉಳಿದವರಿಲ್ಲ
ಅಬ್ಬರಿಸಿ ಭೊಬ್ಭಿರಿದರಿಲ್ಲಾರಿಗೂ ಭಯವಿಲ್ಲ
ಆರ್ಭಟಿಸಿ ಬರುತಿದೆ ನೋಡು ಅಂತಕನ ಆಹ್ವಾನ
ಅಂತಕನಿಗೆ ಅಂತಕನು ಈ ಬಭ್ರುವಾಹನ

Wednesday, May 25, 2011

ಆಡಿಸಿ ನೋಡು ಬೀಳಿಸಿ ನೋಡು Aaadisi Nodu Beelisi Nodu


ಹಾಡು: ಆಡಿಸಿ  ನೋಡು  ಬೀಳಿಸಿ  ನೋಡು
ಚಿತ್ರ: ಕಸ್ತೂರಿ ನಿವಾಸ 
ಸಾಹಿತ್ಯ: ಚಿ ಉದಯಶಂಕರ್ 



ಆಡಿಸಿ  ನೋಡು  ಬೀಳಿಸಿ  ನೋಡು  ಉರುಳಿ  ಹೋಗದು 
ಏನೇ  ಬರಲಿ  ಯಾರಿಗೂ  ಸೋತು  ತಲೆಯ  ಬಾಗದು 
ಎಂದಿಗೂ  ನಾನು  ಹೀಗೆ  ಇರುವೆ  ಎಂದು  ನಗುವುದು 
ಹೀಗೆ  ನಗುತಲಿರುವುದು.....

ಆಡಿಸಿ  ನೋಡು  ಬೀಳಿಸಿ  ನೋಡು  ಉರುಳಿ  ಹೋಗದು

ಗುಡಿಸಲೇ  ಆಗಲಿ  ಅರಮನೆ  ಆಗಲಿ  ಆಟ  ನಿಲ್ಲದು 
ಹಿರಿಯರೇ  ಇರಲಿ  ಕಿರಿಯರೆ  ಬರಲಿ  ಬೇದ ತೋರದು..
ಕಷ್ಟವೋ  ಸುಖವೋ  ಅಳುಕದೆ  ಆಡಿ  ತೂಗುತಿರುವುದು .. ತೂಗುತಿರುವುದು..

ಆಡಿಸಿ  ನೋಡು  ಬೀಳಿಸಿ  ನೋಡು  ಉರುಳಿ  ಹೋಗದು

ಮಯ್ಯನೇ  ಹಿಂಡಿ ನೊಂದರು  ಕಬ್ಬು  ಸಿಹಿಯ  ಕೊಡುವುದು ..
ತೆಯುತಲಿದ್ದರು  ಗಂಧದ  ಪರಿಮಳ  ತುಂಬಿ  ಬರುವುದು ..
ತಾನೆ  ಉರಿದರು  ದೀಪವು  ಮನೆಗೆ  ಬೆಳಕ  ತರುವುದು ..
ದೀಪ .. ಬೆಳಕ  ತರುವುದು ..

ಆಡಿಸಿ  ನೋಡು  ಬೀಳಿಸಿ  ನೋಡು  ಉರುಳಿ  ಹೋಗದು 

ಆಡಿಸುವಾಥನ  ಕೈ  ಚಲಕದಲಿ  ಎಲ್ಲ  ಅಡಗಿದೆ 
ಆತನ  ಕರುಣೆಯೇ  ಜೀವವ  ತುಂಬಿ  ಕುಣಿಸಿ  ನಲಿಸಿದೆ 
ಆ  ಕೈ  ಸೋತರೆ  ಬೊಂಬೆಯ  ಕತೆಯು  ಕೊನೆಯಾಗುವುದೇ .. ಕೊನೆಯಾಗುವುದೇ ..

ಆಡಿಸಿ  ನೋಡು  ಬೀಳಿಸಿ  ನೋಡು  ಉರುಳಿ  ಹೋಗದು 

ಏನೇ  ಬರಲಿ  ಯಾರಿಗೂ  ಸೋತು  ತಲೆಯ  ಬಾಗದು 
ಎಂದಿಗೂ  ನಾನು  ಹೀಗೆ  ಇರುವೆ  ಎಂದು  ನಗುವುದು 
ಹೀಗೆ  ನಗುತಲಿರುವುದು ..
ಆಡಿಸಿ  ನೋಡು  ಬೀಳಿಸಿ  ನೋಡು  ಉರುಳಿ  ಹೋಗದು 

Monday, May 23, 2011

ನಾ ಬೋರ್ಡು ಇರದ ಬಸ್ಸನು ಹತ್ತಿ ಬಂದ ಚೋಕರಿ Naa board erada busaanu


ಹಾಡು: ನಾ ಬೋರ್ಡು ಇರದ ಬಸ್ಸನು
ಚಿತ್ರ : ಹುಡುಗ್ರು 
ಸಾಹಿತ್ಯ: ಯೋಗರಾಜ್ ಭಟ್
ಅರೆ  ಬಿಂಕು...
ದಿಪ್ಪರಿ ದಿಪ್ಪಂಗು...ದಿಪ್ಪರಿ  ದಿಪ್ಪಂಗು...ದಿಪ್ಪರಿ  ದಿಪ್ಪಂಗು...ದಿಪಕ್ ದಿಪಕ್
ನಾ ಬೋರ್ಡು ಇರದ ಬಸ್ಸನು ಹತ್ತಿ ಬಂದ ಚೋಕರಿ
ದಾರೀಲಿ ಕಮಲ ಹಾಸನು ಸಿಗಲಿಲ್ಲ ಯಾಕೆರಿ ?
 
ಈ  ಪೋಲಿ  ರಾಣಿ  ಜೇನನು  ನೋಡಿ  ನೀವು ನಾಚಿರಿ 
ಆ  ದೇವ್ರು  ಕೊಟ್ಟ  ಕಣ್ಣನು  ಮುಚ್ಚೋದಿಲ್ಲ  ನಂಬಿರಿ
ಪಿಚ್ಚರ್ರು  ಮುಗಿದ  ಮೇಲು  ಡ್ರಿಮಲ್ಲಿ  ಬರುವೆನು 
ಕನಸಲಿ  ನಿಮ್ಮ  ಕೆನ್ನೆ  ಮುದ್ದಾಡಿ  ಹೋಗುವೆನು 
ಡಿಸ್ಟರ್ಬ್  ಮಾಡುತಿರುವೆ  ಅಯ್ ಯಮ್ ಸಾರೀ 

ತೊಂದರೆ  ಇಲ್ಲ  ಪಂಕಜ 
ನಿಂದೆ  ಎಲ್ಲ  ಪಂಕಜ 
ನಾವ್  ನಿಮ್ಮೊರೆ  ಪಂಕಜ 

ದಿಪ್ಪರಿ ದಿಪ್ಪಂಗು...ದಿಪ್ಪರಿ  ದಿಪ್ಪಂಗು...ದಿಪ್ಪರಿ  ದಿಪ್ಪಂಗು...ದಿಪಕ್ ದಿಪಕ್ 
ನಾ  ಬೋರ್ಡು  ಇರದ  ಬಸ್ಸನು ಹತ್ತಿ ಬಂದ ಚೋಕರಿ
ದಾರೀಲಿ  ಕಮಲ ಹಾಸನು ಸಿಗಲಿಲ್ಲ ಯಾಕೆರಿ ? 
ಈ  ಪೋಲಿ  ರಾಣಿ  ಜೇನನು  ನೋಡಿ  ನೀವು ನಾಚಿರಿ 
ಆ  ದೇವ್ರು  ಕೊಟ್ಟ  ಕಣ್ಣನು  ಮುಚ್ಚೋದಿಲ್ಲ  ನಂಬಿರಿ
ಅಕ್ಕ ನಿಮ್ಮನೆಯಲ್ಲಿ ನಾಯಿಗೂ ಡಾನ್ಸ್ ಬರುತ್ತಾ ? ಬರುತ್ತಾ ? ನಿಮ್ಮೊರಲ್ಲಿ ತಮಟೆನ ಹೊಡೆಯೋಕೆ ಚಾನ್ಸ್ ಸಿಗುತ್ತಾ ? ಸಿಗುತ್ತಾ ? ಕೇಳಬೇಡ ನನ್ನನ್ನು ಹೊಡಿ ತಮಟೆಯನ್ನು ನೆಲ ಡೊಂಕು ಇದ್ರುನು ಕುಣಿತಿನಿ ನಾನು ತಪ್ಪು ತಿಳಿಬೆದ್ರಪ್ಪೋ ಬಿದ್ದರೆ ಮೈ ಮೇಲೆ ತೊಂದರೆ ಇಲ್ಲ ಪಂಕಜ ಬಿದ್ದು ನೋಡು ಪಂಕಜ ನಾವ್ ಇಲ್ವೇನೆ ಪಂಕಜ 
ನಾ  ಬೋರ್ಡು  ಇರದ  ಬಸ್ಸನು ಹತ್ತಿ ಬಂದ ಚೋಕರಿ
ದಾರೀಲಿ  ಕಮಲ ಹಾಸನು ಸಿಗಲಿಲ್ಲ ಯಾಕೆರಿ ? 
ಈ  ಪೋಲಿ  ರಾಣಿ  ಜೇನನು  ನೋಡಿ  ನೀವು ನಾಚಿರಿ 
ಆ  ದೇವ್ರು  ಕೊಟ್ಟ  ಕಣ್ಣನು  ಮುಚ್ಚೋದಿಲ್ಲ  ನಂಬಿರಿ
ಪಂಕಜ....ಆಜ , ಪಂಕಜ....ಆಜ..... ಶೀಲ ಕಿ ಜವಾನಿ ಯುಸೆ ಇಲ್ಲ ನೀವೇ ಶಕಿರ , ಶಕಿರ ನಂಬರ್ ಒನ್ ನೀವೇನೇ ಅನ್ನೋದು ನಮ್ಮ ವಿಚಾರ , ವಿಚಾರ ಹಳೆ ವಾಯ್ಸ್ ಹೊಸ್ದೊಳಗೆ ಹೋಗಬೇಕು ಚಿನ್ನು ಅವರಿಂದ ಉತ್ತರ ಆದವಳು ನಾನು ಕಷ್ಟದಲಿ ಇದ್ದಾಗ ಬೇಕು ಗಂಡುಮಕ್ಕಲೆ ಎಂಥ ಮಾತು ಪಂಕಜ ಎಲ್ಲಿ ಇದ್ದೆ ಪಂಕಜ ನಾವ್ ನಿಮ್ಮೊರೆ ಪಂಕಜ 
ನಾ  ಬೋರ್ಡು  ಇರದ  ಬಸ್ಸನು ಹತ್ತಿ ಬಂದ ಚೋಕರಿ
ದಾರೀಲಿ  ಕಮಲ ಹಾಸನು ಸಿಗಲಿಲ್ಲ ಯಾಕೆರಿ ? 
ಈ  ಪೋಲಿ  ರಾಣಿ  ಜೇನನು  ನೋಡಿ  ನೀವು ನಾಚಿರಿ 
ಆ  ದೇವ್ರು  ಕೊಟ್ಟ  ಕಣ್ಣನು  ಮುಚ್ಚೋದಿಲ್ಲ  ನಂಬಿರಿ

Monday, May 16, 2011

ನೀರಲ್ಲಿ ಸಣ್ಣ ಅಲೆಯೊಂದು Neeralli Sanna Aleyondu ( Hudugru )


ಹಾಡು: ನೀರಲ್ಲಿ ಸಣ್ಣ ಅಲೆಯೊಂದು
ಚಿತ್ರ : ಹುಡುಗ್ರು 
ಸಾಹಿತ್ಯ: ಯೋಗರಾಜ್ ಭಟ್
ನೀರಲ್ಲಿ  ಸಣ್ಣ  ಅಲೆಯೊಂದು  ಮೂಡಿ  ಚೂರಾದ  ಚಂದ್ರನೀಗ 
ಇಲ್ಲೊಂದು  ಚೂರು  ಅಲ್ಲೊಂದು  ಚೂರು  ಒಂದಾಗ  ಬೇಕು ಬೇಗ 
ತುಸು  ದೂರ  ಸುಮ್ಮನೆ  ಜೊತೆಯಲ್ಲಿ  ಬಂದೆಯ 
ನಡುವೆಲ್ಲೋ ಮೆಲ್ಲಗೆ ಮಾಯವಾದೆಯ !!!

ನೀರಲ್ಲಿ  ಸಣ್ಣ ಅಲೆಯೊಂದು ಮೂಡಿ ಚೂರಾದ ಚಂದ್ರನೀಗ 
ಇಲ್ಲೊಂದು ಚೂರು ಅಲ್ಲೊಂದು ಚೂರು ಒಂದಾಗ ಬೇಕು ಬೇಗ !!! ಇದ್ದಲ್ಲೇ ಆಲಿಸಬಲ್ಲೆ ನಿನ್ನೆಲ್ಲ ಪಿಸುಮಾತು ನನ್ನಲ್ಲಿ ನೀನಿರುವಾಗ ಇನ್ನೇಕೆ ರುಜುವಾತು ನೆನಪಿನಲ್ಲೇ ನೀನೀಗ ಎಂದಿಗಿಂತ ಸನಿಹ ಅಳಿಸಲಾರೆ ನಾನಿಂದು ಮನದ ಗೋಡೆ ಬರಹ ಸಹಿಯಾದ ಮೇಲೆ ಸಹ ಗೀತೆಯೊಂದು ಮರೆಯಾಯಿತೆಕೆ ನೋಡು ಇಲ್ಲೊಂದು ಸಾಲು ಅಲ್ಲೊಂದು ಸಾಲು ಬೇರೆತಾಗಲೇನೆ ಹಾಡು !!!
ನೀರಲ್ಲಿ  ಸಣ್ಣ ಅಲೆಯೊಂದು ಮೂಡಿ ಚೂರಾದ ಚಂದ್ರನೀಗ 
ಇಲ್ಲೊಂದು ಚೂರು ಅಲ್ಲೊಂದು ಚೂರು ಒಂದಾಗ ಬೇಕು ಬೇಗ !!!
ದಾರೀಲಿ ಹೂಗಿಡವೊಂದು ಕಟ್ಟಿಲ್ಲ ಹೂಮಳೆ ಕಣ್ಣಲ್ಲಿ ಕಣ್ಣಿಡು ನೀನು ಮತ್ತಿಲ್ಲ ಆಮೇಲೆ ಕಾಣಬಲ್ಲೆ ಕನಸಲ್ಲೂ ನಿನ್ನ ಹೆಜ್ಜೆ ಗುರುತು ಕೇಳ ಬೇಡ ಇನ್ನೇನು ನೀನು ನನ್ನ ಕುರಿತು ಎದೆಯಾಳದಿಂದ ಮಧು ಮೌನವೊಂದು ಕರೆವಾಗ ಜಂಟಿಯಾಗಿ ಇಲ್ಲೊಂದು ಜೀವ ಅಲ್ಲೊಂದು ಜೀವ ಇರಬೇಕೆ ಒಂಟಿಯಾಗಿ !!!
ನೀರಲ್ಲಿ  ಸಣ್ಣ ಅಲೆಯೊಂದು ಮೂಡಿ ಚೂರಾದ ಚಂದ್ರನೀಗ 
ಇಲ್ಲೊಂದು ಚೂರು ಅಲ್ಲೊಂದು ಚೂರು ಒಂದಾಗ ಬೇಕು ಬೇಗ !!!

Tuesday, April 26, 2011

ಎರಡು ಜಡೆಯನ್ನು ಎಳೆದು ಕೇಳುವೆನು Eradu Jadeyannu



    ಹಾಡು: ಎರಡು  ಜಡೆಯನ್ನು  ಎಳೆದು  ಕೇಳುವೆನು 
    ಚಿತ್ರ : ಜಾಕಿ 
    ಸಾಹಿತ್ಯ: ಯೋಗರಾಜ್ ಭಟ್ 


ಎರಡು  ಜಡೆಯನ್ನು  ಎಳೆದು  ಕೇಳುವೆನು 
ನೀ  ಸ್ವಲ್ಪ  ನಿಲಬಾರದೇ
ಎರಡು  ನೆರಳೇಕೆ  ನಾವಿಬ್ಬರು  ಒಂದೇ
ಬಳಿ  ನೀನು  ಬರಬಾರದೇ..
ನೀ  ದೂರ  ನಿಂತಾಗ  ಬಾಯೆಂದು  ನಾ  ನಿನ್ನ  ಕೂಗೋದು  ಚಟವಲ್ಲವೇ..
ಇಷ್ಟೊಂದು  ಒಲವಲ್ಲಿ  ನಿನ್ನ  ನೀಳ ತೋಳನ್ನು  ಬಯಸೋದೆ  ಹಿತವಲ್ಲವೆ ..
ಎರಡು  ಕಂಗಳಿಗೆ  ಮುತ್ತು  ನೀಡುವೆನು
ನೀನಿಲ್ಲಿ  ಬರಬಾರದೇ..
ಎಲ್ಲ  ಕನಸನ್ನು  ಒಂದೇ  ನೆರಳಲ್ಲಿ
ಸಾಲಾಗಿ   ಇಡಬಾರದೇ

ಬಾಯಾರಿ  ನಾ  ನಿಂತ  ಗಳಿಗೇಲಿ  ಮಳೆಯೊಂದು  ತಾನಾಗಿ  ಬರಬಾರದೇ ..
ಹಾಯಾಧ  ಸಂಜೆಯಲಿ ಹುಸಿ  ಮುನಿಸು  ಬಂದಾಗ  ನೀನೊಮ್ಮೆ  ಸಿಗಬಾರದೇ..
ನೀನಿಲ್ಲದಾಗ  ನಾ  ಕಂಡ  ಕನಸು  ಅತಿಯಾಗಿ  ನೆನಪಾಗಿದೆ
ಬಿಡದೆ  ಕಂಗಳಿಗೆ  ಮುತ್ತು  ನೀಡುವೆನು
ನೀನಿಲ್ಲೇ  ಇರಬಾರದೇ ..
ಎಲ್ಲ  ಕನಸನ್ನು  ಒಂದೇ  ನೆರಳಲ್ಲಿ
ಸಾಲಾಗಿ  ಇದಬಾರದೆ ..
ನಾ  ತುಂಬಾ  ನಗುವಾಗ  ಈ  ಕೆನ್ನೆ ಮೇಲೊಂದು  ಚುಕ್ಕಿನ  ಇದಬಾರದೆ ..
ಕುಶಿಯಲ್ಲಿ  ನಿನ್ನನ್ನು  ಮಗುವಂತೆ  ಬಿಗಿದಪ್ಪಿ  ನಾ  ಬಿಕ್ಕಿ  ಅಳಬಾರದೆ..
ನಿನ್ನಿಂದ  ಕನಸು  ನಿನ್ನಿಂದಲೇ  ಮುನಿಸು
ಕಲಿಯೋದು  ಮಜವಾಗಿದೆ ..

ಎರಡು  ಜಡೆಯನ್ನು  ಎಳೆದು  ಕೇಳುವೆನು
ನೀ  ಸ್ವಲ್ಪ  ನಿಲಬಾರದೇ
ಎರಡು  ನೆರಳೇಕೆ  ನಾವಿಬ್ಬರು  ಒಂದೇ
ಬಳಿ  ನೀನು  ಬರಬಾರದೇ..
ನೀ  ದೂರ  ನಿಂತಾಗ  ಬಾಯೆಂದು  ನಾ  ನಿನ್ನ  ಕೂಗೋದು  ಚಟವಲ್ಲವೇ..
ಇಷ್ಟೊಂದು  ಒಲವಲ್ಲಿ  ನಿನ್ನ  ನೀಳ  ತೋಳನ್ನು  ಬಯಸೋದೆ  ಹಿತವಲ್ಲವೆ ..
ಎರಡು  ಕಂಗಳಿಗೆ  ಮುತ್ತು  ನೀಡುವೆನು
ನೀನಿಲ್ಲಿ  ಬರಬಾರದೇ..
ಎಲ್ಲ  ಕನಸನ್ನು  ಒಂದೇ  ನೆರಳಲ್ಲಿ
ಸಾಲಾಗಿ  ಇಡಬಾರದೇ

Wednesday, April 13, 2011

ಗಗನವೇ ಬಾಗಿ Gaganave Baagi


ಹಾಡು: ಗಗನವೇ  ಬಾಗಿ  ಭುವಿಯನು  ಕೇಳಿದ  ಹಾಗೆ..
ಚಿತ್ರ : ಸಂಜು ವೆಡ್ಸ್ ಗೀತ
ಸಾಹಿತ್ಯ: ಕವಿರಾಜ್


ಗಗನವೇ  ಬಾಗಿ  ಭುವಿಯನು  ಕೇಳಿದ  ಹಾಗೆ..
ಕಡಲು  ಕರೆದಂತೆ  ನದಿಯನು  ಭೇಟಿಗೆ..
ಯಾರು  ಬಂದಿರದ  ಮನಸಲಿ .. ನಿನ್ನ  ಆಗಮನ   ಈ  ದಿನ ..
ನೀಡುವ  ಮುನ್ನ  ನಾನೇ  ಆಮಂತ್ರಣ ..
ಗಗನವೇ  ಬಾಗಿ  ಭುವಿಯನು  ಕೇಳಿದ  ಹಾಗೆ..
ಕಡಲು  ಕರೆದಂತೆ  ನದಿಯನು  ಭೇಟಿಗೆ..

ಜೀವನ ಈ  ಕ್ಷಣ ಶುರುವಾದಂತಿದೆ ..
ಕನಸಿನ  ಊರಿನ  ಕದ  ತೆರೆಯುತ್ತಿದೆ ..
ಅಳಬೇಕು  ಒಮ್ಮೆ  ಅಂತನಿಸಿದೆ  .. ಖುಷಿಯೀಗ   ಮೇರೆ  ಮೀರಿ ..
ಮಧುಮಾಸದಂತೆ  ಕೈಚಾಚಿದೆ .. ಹಸಿರಾಯ್ತು  ನನ್ನ  ದಾರಿ
ನೀಡುವ  ಮುನ್ನ  ನಾನೇ  ಆಮಂತ್ರಣ ..
ಗಗನವೇ  ಬಾಗಿ  ಭುವಿಯನು  ಕೇಳಿದ  ಹಾಗೆ ..
ಕಡಲು  ಕರೆದಂತೆ  ನದಿಯನು  ಭೇಟಿಗೆ ..
ಯಾರು  ಬಂದಿರದ  ಮನಸಲಿ .. ನಿನ್ನ  ಆಗಾಮನ  ಈ  ದಿನ ..
ನೀಡುವ  ಮುನ್ನ  ನಾನೇ  ಆಮಂತ್ರಣ ..

ಸಾವಿನ  ಅಂಚಿನ  ಬದುಕಂತಾದೆ   ನೀನು ..
ಸಾವಿರ ಸೂರ್ಯನ  ಬೆಳಕಂತಾದೆ  ನೀನು ..
ಕೊನೆಯಾಸೆ  ಒಂದೇ  ಈ  ಜೀವಕೆ  ನಿನ್ನ  ಕೂಡಿ  ಬಾಳಬೇಕು
ಪ್ರತಿ  ಜನ್ಮದಲ್ಲೂ  ನೀ  ಹೀಗೆಯೇ  ನನ್ನ  ಪ್ರೀತಿ  ಮಾಡಬೇಕು..
ನೀಡುವ  ಮುನ್ನ  ನಾನೇ  ಆಮಂತ್ರಣ ..
ಗಗನವೇ  ಬಾಗಿ  ಭುವಿಯನು  ಕೇಳಿದ  ಹಾಗೆ ..
ಕಡಲು  ಕರೆದಂತೆ  ನದಿಯನು  ಭೇಟಿಗೆ ..
ಯಾರು  ಬಂದಿರದ  ಮನಸಲಿ .. ನಿನ್ನ  ಆಗಾಮನ  ಈ  ದಿನ ..
ನೀಡುವ  ಮುನ್ನ  ನಾನೇ  ಆಮಂತ್ರಣ ..



ಗಗನವೇ ಬಾಗಿ....

Wednesday, April 6, 2011

ಸಂಜು ಮತ್ತು ಗೀತ ಸೇರಬೇಕು ಅಂತ Sanju mattu Geetha



ಹಾಡು: ಸಂಜು  ಮತ್ತು  ಗೀತ  ಸೇರಬೇಕು  ಅಂತ..
ಚಿತ್ರ : ಸಂಜು ವೆಡ್ಸ್ ಗೀತ
ಸಾಹಿತ್ಯ: ಕವಿರಾಜ್



ಸಂಜು  ಮತ್ತು  ಗೀತ  ಸೇರಬೇಕು  ಅಂತ..
ಬರೆದಾಗಿದೆ  ಇಂದು  ಬ್ರಹ್ಮನು ..
ನನ್ನ  ಜೀವಕಿಂತ .. ನೀನೆ  ನನ್ನ  ಸ್ವಂತ ..
ಇರುವಾಗ  ನಾನು  ಚಿಂತೆ  ಏನು ..
ನಿನ್ನ  ಎಲ್ಲ  ನೋವನ್ನು .. ಕೊಡುಗೆ  ನೀಡು  ನನಗಿನ್ನೂ ..
ನನ್ನ  ಎಲ್ಲ  ಖುಷಿಯನ್ನು . ಕೊಡುವೆ  ನಿನ್ನ  ವಶಕಿನ್ನು ..
ಮಳೆಯ  ಹನಿ  ಉರುಳೋ  ದನಿ  ತರವೇ ..
ನಗಬಾರದೇ .. ನಗಬಾರದೇ .. ನನ್ನೊಲವೆ ..
ಸಂಜು  ಮತ್ತು  ಗೀತ  ಸೇರಬೇಕು  ಅಂತ ..
ಬರೆದಾಗಿದೆ  ಇಂದು  ಬ್ರಹ್ಮನು ..

ಆ  ಕಣ್ಣಿಗೊಂದು  ಈ  ಕಣ್ಣಿಗೊಂದು .. ಸ್ವರ್ಗನ  ತಂದು  ಕೊಡಲೇನು  ಇಂದು
ಏನಾಗಲಿ  ನನ್ನ  ಸಂಗಾತಿ   ನೀ .. ನಿನ್ನ  ಎಎ   ಕಣ್ಣಲಿ  ಇದೆ  ಕೊನೆಯ  ಹನಿ
ಎದೆಯ  ಗೂಡಿನಲ್ಲಿ  ಪುಟ್ಟ  ಗುಬ್ಬಿಯಂತೆ  ನಿನ್ನ .. ಬೆಚ್ಚನೆಯ  ಪ್ರೀತಿ  ಕೊಟ್ಟು  ಬಚ್ಚಿ  ಇಡುವೇ  ಚಿನ್ನ
ಇತಿಹಾಸದ  ಪುಟ  ಕಾಣದ  ಒಲುಮೆ  ನೀಡುವೆ ..
ಮಳೆಯ  ಹನಿ  ಉರುಳೋ  ದನಿ  ತರವೇ ..
ನಗಬಾರದೇ .. ನಗಬಾರದೇ .. ನನ್ನೊಲವೆ ..
ಸಂಜು  ಮತ್ತು  ಗೀತ  ಸೇರಬೇಕು  ಅಂತ ..
ಬರೆದಾಗಿದೆ  ಇನ್ಧು  ಬ್ರಹ್ಮನು ..

ತಂಗಾಳಿಯಾಗೋ  ಬಿರುಗಾಳಿಯಾಗೋ  ನೀ  ಒಮ್ಮೆ  ಬಂದು  ನನ್ನ  ಸೋಕಿ  ಹೋಗು ..
ನಿನ್ನ  ನೋಡದೆ  ಅಳುವೇ  ಬರುತಿದೆ .. ನಿನ್ನ  ನಗುವಿಲ್ಲದೆ  ಜಗ  ನಿಂತಿದೆ ..
ನಿದಿರೆ  ಬರದ  ಕನ್ನೆ .. ಬಾರೆ  ಹಗಲು  ಗನಸ  ಹಾಗೆ ..
ಬಳಲಿ  ಹೋದ  ನನಗೆ .. ಬಾರೆ  ಜೀವ  ತುಂಬೋ  ಹಾಗೆ ..
ಉಸಿರಾಡುವ  ಶವವಾದೆ  ನಾ , ನೀನು  ಇಲ್ಲದೆ ..
ಮಳೆ  ನಿಂತರು   ಮರದ  ಹನಿ  ತರವೇ ..
ಬಾ  ಇಲ್ಲಿಗೆ .. ನನ್ನಲ್ಲಿಗೆ .. ನನ್ನೊಲವೆ ..
ಸಂಜು  ಮತ್ತು  ಗೀತ  ಸೇರಬೇಕು  ಅಂತ ..
ಬರೆದಾಗಿದೆ  
ಇಂದು ಬ್ರಹ್ಮನು ..