Wednesday, May 25, 2011

ಆಡಿಸಿ ನೋಡು ಬೀಳಿಸಿ ನೋಡು Aaadisi Nodu Beelisi Nodu


ಹಾಡು: ಆಡಿಸಿ  ನೋಡು  ಬೀಳಿಸಿ  ನೋಡು
ಚಿತ್ರ: ಕಸ್ತೂರಿ ನಿವಾಸ 
ಸಾಹಿತ್ಯ: ಚಿ ಉದಯಶಂಕರ್ 



ಆಡಿಸಿ  ನೋಡು  ಬೀಳಿಸಿ  ನೋಡು  ಉರುಳಿ  ಹೋಗದು 
ಏನೇ  ಬರಲಿ  ಯಾರಿಗೂ  ಸೋತು  ತಲೆಯ  ಬಾಗದು 
ಎಂದಿಗೂ  ನಾನು  ಹೀಗೆ  ಇರುವೆ  ಎಂದು  ನಗುವುದು 
ಹೀಗೆ  ನಗುತಲಿರುವುದು.....

ಆಡಿಸಿ  ನೋಡು  ಬೀಳಿಸಿ  ನೋಡು  ಉರುಳಿ  ಹೋಗದು

ಗುಡಿಸಲೇ  ಆಗಲಿ  ಅರಮನೆ  ಆಗಲಿ  ಆಟ  ನಿಲ್ಲದು 
ಹಿರಿಯರೇ  ಇರಲಿ  ಕಿರಿಯರೆ  ಬರಲಿ  ಬೇದ ತೋರದು..
ಕಷ್ಟವೋ  ಸುಖವೋ  ಅಳುಕದೆ  ಆಡಿ  ತೂಗುತಿರುವುದು .. ತೂಗುತಿರುವುದು..

ಆಡಿಸಿ  ನೋಡು  ಬೀಳಿಸಿ  ನೋಡು  ಉರುಳಿ  ಹೋಗದು

ಮಯ್ಯನೇ  ಹಿಂಡಿ ನೊಂದರು  ಕಬ್ಬು  ಸಿಹಿಯ  ಕೊಡುವುದು ..
ತೆಯುತಲಿದ್ದರು  ಗಂಧದ  ಪರಿಮಳ  ತುಂಬಿ  ಬರುವುದು ..
ತಾನೆ  ಉರಿದರು  ದೀಪವು  ಮನೆಗೆ  ಬೆಳಕ  ತರುವುದು ..
ದೀಪ .. ಬೆಳಕ  ತರುವುದು ..

ಆಡಿಸಿ  ನೋಡು  ಬೀಳಿಸಿ  ನೋಡು  ಉರುಳಿ  ಹೋಗದು 

ಆಡಿಸುವಾಥನ  ಕೈ  ಚಲಕದಲಿ  ಎಲ್ಲ  ಅಡಗಿದೆ 
ಆತನ  ಕರುಣೆಯೇ  ಜೀವವ  ತುಂಬಿ  ಕುಣಿಸಿ  ನಲಿಸಿದೆ 
ಆ  ಕೈ  ಸೋತರೆ  ಬೊಂಬೆಯ  ಕತೆಯು  ಕೊನೆಯಾಗುವುದೇ .. ಕೊನೆಯಾಗುವುದೇ ..

ಆಡಿಸಿ  ನೋಡು  ಬೀಳಿಸಿ  ನೋಡು  ಉರುಳಿ  ಹೋಗದು 

ಏನೇ  ಬರಲಿ  ಯಾರಿಗೂ  ಸೋತು  ತಲೆಯ  ಬಾಗದು 
ಎಂದಿಗೂ  ನಾನು  ಹೀಗೆ  ಇರುವೆ  ಎಂದು  ನಗುವುದು 
ಹೀಗೆ  ನಗುತಲಿರುವುದು ..
ಆಡಿಸಿ  ನೋಡು  ಬೀಳಿಸಿ  ನೋಡು  ಉರುಳಿ  ಹೋಗದು 

No comments:

Post a Comment