Tuesday, April 26, 2011

ಎರಡು ಜಡೆಯನ್ನು ಎಳೆದು ಕೇಳುವೆನು Eradu Jadeyannu



    ಹಾಡು: ಎರಡು  ಜಡೆಯನ್ನು  ಎಳೆದು  ಕೇಳುವೆನು 
    ಚಿತ್ರ : ಜಾಕಿ 
    ಸಾಹಿತ್ಯ: ಯೋಗರಾಜ್ ಭಟ್ 


ಎರಡು  ಜಡೆಯನ್ನು  ಎಳೆದು  ಕೇಳುವೆನು 
ನೀ  ಸ್ವಲ್ಪ  ನಿಲಬಾರದೇ
ಎರಡು  ನೆರಳೇಕೆ  ನಾವಿಬ್ಬರು  ಒಂದೇ
ಬಳಿ  ನೀನು  ಬರಬಾರದೇ..
ನೀ  ದೂರ  ನಿಂತಾಗ  ಬಾಯೆಂದು  ನಾ  ನಿನ್ನ  ಕೂಗೋದು  ಚಟವಲ್ಲವೇ..
ಇಷ್ಟೊಂದು  ಒಲವಲ್ಲಿ  ನಿನ್ನ  ನೀಳ ತೋಳನ್ನು  ಬಯಸೋದೆ  ಹಿತವಲ್ಲವೆ ..
ಎರಡು  ಕಂಗಳಿಗೆ  ಮುತ್ತು  ನೀಡುವೆನು
ನೀನಿಲ್ಲಿ  ಬರಬಾರದೇ..
ಎಲ್ಲ  ಕನಸನ್ನು  ಒಂದೇ  ನೆರಳಲ್ಲಿ
ಸಾಲಾಗಿ   ಇಡಬಾರದೇ

ಬಾಯಾರಿ  ನಾ  ನಿಂತ  ಗಳಿಗೇಲಿ  ಮಳೆಯೊಂದು  ತಾನಾಗಿ  ಬರಬಾರದೇ ..
ಹಾಯಾಧ  ಸಂಜೆಯಲಿ ಹುಸಿ  ಮುನಿಸು  ಬಂದಾಗ  ನೀನೊಮ್ಮೆ  ಸಿಗಬಾರದೇ..
ನೀನಿಲ್ಲದಾಗ  ನಾ  ಕಂಡ  ಕನಸು  ಅತಿಯಾಗಿ  ನೆನಪಾಗಿದೆ
ಬಿಡದೆ  ಕಂಗಳಿಗೆ  ಮುತ್ತು  ನೀಡುವೆನು
ನೀನಿಲ್ಲೇ  ಇರಬಾರದೇ ..
ಎಲ್ಲ  ಕನಸನ್ನು  ಒಂದೇ  ನೆರಳಲ್ಲಿ
ಸಾಲಾಗಿ  ಇದಬಾರದೆ ..
ನಾ  ತುಂಬಾ  ನಗುವಾಗ  ಈ  ಕೆನ್ನೆ ಮೇಲೊಂದು  ಚುಕ್ಕಿನ  ಇದಬಾರದೆ ..
ಕುಶಿಯಲ್ಲಿ  ನಿನ್ನನ್ನು  ಮಗುವಂತೆ  ಬಿಗಿದಪ್ಪಿ  ನಾ  ಬಿಕ್ಕಿ  ಅಳಬಾರದೆ..
ನಿನ್ನಿಂದ  ಕನಸು  ನಿನ್ನಿಂದಲೇ  ಮುನಿಸು
ಕಲಿಯೋದು  ಮಜವಾಗಿದೆ ..

ಎರಡು  ಜಡೆಯನ್ನು  ಎಳೆದು  ಕೇಳುವೆನು
ನೀ  ಸ್ವಲ್ಪ  ನಿಲಬಾರದೇ
ಎರಡು  ನೆರಳೇಕೆ  ನಾವಿಬ್ಬರು  ಒಂದೇ
ಬಳಿ  ನೀನು  ಬರಬಾರದೇ..
ನೀ  ದೂರ  ನಿಂತಾಗ  ಬಾಯೆಂದು  ನಾ  ನಿನ್ನ  ಕೂಗೋದು  ಚಟವಲ್ಲವೇ..
ಇಷ್ಟೊಂದು  ಒಲವಲ್ಲಿ  ನಿನ್ನ  ನೀಳ  ತೋಳನ್ನು  ಬಯಸೋದೆ  ಹಿತವಲ್ಲವೆ ..
ಎರಡು  ಕಂಗಳಿಗೆ  ಮುತ್ತು  ನೀಡುವೆನು
ನೀನಿಲ್ಲಿ  ಬರಬಾರದೇ..
ಎಲ್ಲ  ಕನಸನ್ನು  ಒಂದೇ  ನೆರಳಲ್ಲಿ
ಸಾಲಾಗಿ  ಇಡಬಾರದೇ

No comments:

Post a Comment