Tuesday, April 26, 2011

ಎರಡು ಜಡೆಯನ್ನು ಎಳೆದು ಕೇಳುವೆನು Eradu Jadeyannu



    ಹಾಡು: ಎರಡು  ಜಡೆಯನ್ನು  ಎಳೆದು  ಕೇಳುವೆನು 
    ಚಿತ್ರ : ಜಾಕಿ 
    ಸಾಹಿತ್ಯ: ಯೋಗರಾಜ್ ಭಟ್ 


ಎರಡು  ಜಡೆಯನ್ನು  ಎಳೆದು  ಕೇಳುವೆನು 
ನೀ  ಸ್ವಲ್ಪ  ನಿಲಬಾರದೇ
ಎರಡು  ನೆರಳೇಕೆ  ನಾವಿಬ್ಬರು  ಒಂದೇ
ಬಳಿ  ನೀನು  ಬರಬಾರದೇ..
ನೀ  ದೂರ  ನಿಂತಾಗ  ಬಾಯೆಂದು  ನಾ  ನಿನ್ನ  ಕೂಗೋದು  ಚಟವಲ್ಲವೇ..
ಇಷ್ಟೊಂದು  ಒಲವಲ್ಲಿ  ನಿನ್ನ  ನೀಳ ತೋಳನ್ನು  ಬಯಸೋದೆ  ಹಿತವಲ್ಲವೆ ..
ಎರಡು  ಕಂಗಳಿಗೆ  ಮುತ್ತು  ನೀಡುವೆನು
ನೀನಿಲ್ಲಿ  ಬರಬಾರದೇ..
ಎಲ್ಲ  ಕನಸನ್ನು  ಒಂದೇ  ನೆರಳಲ್ಲಿ
ಸಾಲಾಗಿ   ಇಡಬಾರದೇ

ಬಾಯಾರಿ  ನಾ  ನಿಂತ  ಗಳಿಗೇಲಿ  ಮಳೆಯೊಂದು  ತಾನಾಗಿ  ಬರಬಾರದೇ ..
ಹಾಯಾಧ  ಸಂಜೆಯಲಿ ಹುಸಿ  ಮುನಿಸು  ಬಂದಾಗ  ನೀನೊಮ್ಮೆ  ಸಿಗಬಾರದೇ..
ನೀನಿಲ್ಲದಾಗ  ನಾ  ಕಂಡ  ಕನಸು  ಅತಿಯಾಗಿ  ನೆನಪಾಗಿದೆ
ಬಿಡದೆ  ಕಂಗಳಿಗೆ  ಮುತ್ತು  ನೀಡುವೆನು
ನೀನಿಲ್ಲೇ  ಇರಬಾರದೇ ..
ಎಲ್ಲ  ಕನಸನ್ನು  ಒಂದೇ  ನೆರಳಲ್ಲಿ
ಸಾಲಾಗಿ  ಇದಬಾರದೆ ..
ನಾ  ತುಂಬಾ  ನಗುವಾಗ  ಈ  ಕೆನ್ನೆ ಮೇಲೊಂದು  ಚುಕ್ಕಿನ  ಇದಬಾರದೆ ..
ಕುಶಿಯಲ್ಲಿ  ನಿನ್ನನ್ನು  ಮಗುವಂತೆ  ಬಿಗಿದಪ್ಪಿ  ನಾ  ಬಿಕ್ಕಿ  ಅಳಬಾರದೆ..
ನಿನ್ನಿಂದ  ಕನಸು  ನಿನ್ನಿಂದಲೇ  ಮುನಿಸು
ಕಲಿಯೋದು  ಮಜವಾಗಿದೆ ..

ಎರಡು  ಜಡೆಯನ್ನು  ಎಳೆದು  ಕೇಳುವೆನು
ನೀ  ಸ್ವಲ್ಪ  ನಿಲಬಾರದೇ
ಎರಡು  ನೆರಳೇಕೆ  ನಾವಿಬ್ಬರು  ಒಂದೇ
ಬಳಿ  ನೀನು  ಬರಬಾರದೇ..
ನೀ  ದೂರ  ನಿಂತಾಗ  ಬಾಯೆಂದು  ನಾ  ನಿನ್ನ  ಕೂಗೋದು  ಚಟವಲ್ಲವೇ..
ಇಷ್ಟೊಂದು  ಒಲವಲ್ಲಿ  ನಿನ್ನ  ನೀಳ  ತೋಳನ್ನು  ಬಯಸೋದೆ  ಹಿತವಲ್ಲವೆ ..
ಎರಡು  ಕಂಗಳಿಗೆ  ಮುತ್ತು  ನೀಡುವೆನು
ನೀನಿಲ್ಲಿ  ಬರಬಾರದೇ..
ಎಲ್ಲ  ಕನಸನ್ನು  ಒಂದೇ  ನೆರಳಲ್ಲಿ
ಸಾಲಾಗಿ  ಇಡಬಾರದೇ

Wednesday, April 13, 2011

ಗಗನವೇ ಬಾಗಿ Gaganave Baagi


ಹಾಡು: ಗಗನವೇ  ಬಾಗಿ  ಭುವಿಯನು  ಕೇಳಿದ  ಹಾಗೆ..
ಚಿತ್ರ : ಸಂಜು ವೆಡ್ಸ್ ಗೀತ
ಸಾಹಿತ್ಯ: ಕವಿರಾಜ್


ಗಗನವೇ  ಬಾಗಿ  ಭುವಿಯನು  ಕೇಳಿದ  ಹಾಗೆ..
ಕಡಲು  ಕರೆದಂತೆ  ನದಿಯನು  ಭೇಟಿಗೆ..
ಯಾರು  ಬಂದಿರದ  ಮನಸಲಿ .. ನಿನ್ನ  ಆಗಮನ   ಈ  ದಿನ ..
ನೀಡುವ  ಮುನ್ನ  ನಾನೇ  ಆಮಂತ್ರಣ ..
ಗಗನವೇ  ಬಾಗಿ  ಭುವಿಯನು  ಕೇಳಿದ  ಹಾಗೆ..
ಕಡಲು  ಕರೆದಂತೆ  ನದಿಯನು  ಭೇಟಿಗೆ..

ಜೀವನ ಈ  ಕ್ಷಣ ಶುರುವಾದಂತಿದೆ ..
ಕನಸಿನ  ಊರಿನ  ಕದ  ತೆರೆಯುತ್ತಿದೆ ..
ಅಳಬೇಕು  ಒಮ್ಮೆ  ಅಂತನಿಸಿದೆ  .. ಖುಷಿಯೀಗ   ಮೇರೆ  ಮೀರಿ ..
ಮಧುಮಾಸದಂತೆ  ಕೈಚಾಚಿದೆ .. ಹಸಿರಾಯ್ತು  ನನ್ನ  ದಾರಿ
ನೀಡುವ  ಮುನ್ನ  ನಾನೇ  ಆಮಂತ್ರಣ ..
ಗಗನವೇ  ಬಾಗಿ  ಭುವಿಯನು  ಕೇಳಿದ  ಹಾಗೆ ..
ಕಡಲು  ಕರೆದಂತೆ  ನದಿಯನು  ಭೇಟಿಗೆ ..
ಯಾರು  ಬಂದಿರದ  ಮನಸಲಿ .. ನಿನ್ನ  ಆಗಾಮನ  ಈ  ದಿನ ..
ನೀಡುವ  ಮುನ್ನ  ನಾನೇ  ಆಮಂತ್ರಣ ..

ಸಾವಿನ  ಅಂಚಿನ  ಬದುಕಂತಾದೆ   ನೀನು ..
ಸಾವಿರ ಸೂರ್ಯನ  ಬೆಳಕಂತಾದೆ  ನೀನು ..
ಕೊನೆಯಾಸೆ  ಒಂದೇ  ಈ  ಜೀವಕೆ  ನಿನ್ನ  ಕೂಡಿ  ಬಾಳಬೇಕು
ಪ್ರತಿ  ಜನ್ಮದಲ್ಲೂ  ನೀ  ಹೀಗೆಯೇ  ನನ್ನ  ಪ್ರೀತಿ  ಮಾಡಬೇಕು..
ನೀಡುವ  ಮುನ್ನ  ನಾನೇ  ಆಮಂತ್ರಣ ..
ಗಗನವೇ  ಬಾಗಿ  ಭುವಿಯನು  ಕೇಳಿದ  ಹಾಗೆ ..
ಕಡಲು  ಕರೆದಂತೆ  ನದಿಯನು  ಭೇಟಿಗೆ ..
ಯಾರು  ಬಂದಿರದ  ಮನಸಲಿ .. ನಿನ್ನ  ಆಗಾಮನ  ಈ  ದಿನ ..
ನೀಡುವ  ಮುನ್ನ  ನಾನೇ  ಆಮಂತ್ರಣ ..



ಗಗನವೇ ಬಾಗಿ....

Wednesday, April 6, 2011

ಸಂಜು ಮತ್ತು ಗೀತ ಸೇರಬೇಕು ಅಂತ Sanju mattu Geetha



ಹಾಡು: ಸಂಜು  ಮತ್ತು  ಗೀತ  ಸೇರಬೇಕು  ಅಂತ..
ಚಿತ್ರ : ಸಂಜು ವೆಡ್ಸ್ ಗೀತ
ಸಾಹಿತ್ಯ: ಕವಿರಾಜ್



ಸಂಜು  ಮತ್ತು  ಗೀತ  ಸೇರಬೇಕು  ಅಂತ..
ಬರೆದಾಗಿದೆ  ಇಂದು  ಬ್ರಹ್ಮನು ..
ನನ್ನ  ಜೀವಕಿಂತ .. ನೀನೆ  ನನ್ನ  ಸ್ವಂತ ..
ಇರುವಾಗ  ನಾನು  ಚಿಂತೆ  ಏನು ..
ನಿನ್ನ  ಎಲ್ಲ  ನೋವನ್ನು .. ಕೊಡುಗೆ  ನೀಡು  ನನಗಿನ್ನೂ ..
ನನ್ನ  ಎಲ್ಲ  ಖುಷಿಯನ್ನು . ಕೊಡುವೆ  ನಿನ್ನ  ವಶಕಿನ್ನು ..
ಮಳೆಯ  ಹನಿ  ಉರುಳೋ  ದನಿ  ತರವೇ ..
ನಗಬಾರದೇ .. ನಗಬಾರದೇ .. ನನ್ನೊಲವೆ ..
ಸಂಜು  ಮತ್ತು  ಗೀತ  ಸೇರಬೇಕು  ಅಂತ ..
ಬರೆದಾಗಿದೆ  ಇಂದು  ಬ್ರಹ್ಮನು ..

ಆ  ಕಣ್ಣಿಗೊಂದು  ಈ  ಕಣ್ಣಿಗೊಂದು .. ಸ್ವರ್ಗನ  ತಂದು  ಕೊಡಲೇನು  ಇಂದು
ಏನಾಗಲಿ  ನನ್ನ  ಸಂಗಾತಿ   ನೀ .. ನಿನ್ನ  ಎಎ   ಕಣ್ಣಲಿ  ಇದೆ  ಕೊನೆಯ  ಹನಿ
ಎದೆಯ  ಗೂಡಿನಲ್ಲಿ  ಪುಟ್ಟ  ಗುಬ್ಬಿಯಂತೆ  ನಿನ್ನ .. ಬೆಚ್ಚನೆಯ  ಪ್ರೀತಿ  ಕೊಟ್ಟು  ಬಚ್ಚಿ  ಇಡುವೇ  ಚಿನ್ನ
ಇತಿಹಾಸದ  ಪುಟ  ಕಾಣದ  ಒಲುಮೆ  ನೀಡುವೆ ..
ಮಳೆಯ  ಹನಿ  ಉರುಳೋ  ದನಿ  ತರವೇ ..
ನಗಬಾರದೇ .. ನಗಬಾರದೇ .. ನನ್ನೊಲವೆ ..
ಸಂಜು  ಮತ್ತು  ಗೀತ  ಸೇರಬೇಕು  ಅಂತ ..
ಬರೆದಾಗಿದೆ  ಇನ್ಧು  ಬ್ರಹ್ಮನು ..

ತಂಗಾಳಿಯಾಗೋ  ಬಿರುಗಾಳಿಯಾಗೋ  ನೀ  ಒಮ್ಮೆ  ಬಂದು  ನನ್ನ  ಸೋಕಿ  ಹೋಗು ..
ನಿನ್ನ  ನೋಡದೆ  ಅಳುವೇ  ಬರುತಿದೆ .. ನಿನ್ನ  ನಗುವಿಲ್ಲದೆ  ಜಗ  ನಿಂತಿದೆ ..
ನಿದಿರೆ  ಬರದ  ಕನ್ನೆ .. ಬಾರೆ  ಹಗಲು  ಗನಸ  ಹಾಗೆ ..
ಬಳಲಿ  ಹೋದ  ನನಗೆ .. ಬಾರೆ  ಜೀವ  ತುಂಬೋ  ಹಾಗೆ ..
ಉಸಿರಾಡುವ  ಶವವಾದೆ  ನಾ , ನೀನು  ಇಲ್ಲದೆ ..
ಮಳೆ  ನಿಂತರು   ಮರದ  ಹನಿ  ತರವೇ ..
ಬಾ  ಇಲ್ಲಿಗೆ .. ನನ್ನಲ್ಲಿಗೆ .. ನನ್ನೊಲವೆ ..
ಸಂಜು  ಮತ್ತು  ಗೀತ  ಸೇರಬೇಕು  ಅಂತ ..
ಬರೆದಾಗಿದೆ  
ಇಂದು ಬ್ರಹ್ಮನು ..